Tuesday, June 20, 2023

ಮಂಡಲದ ಹಾವು (Indian Russell viper).

ಹಾವು...! ಅಂದರೆ ಎಲ್ಲರೂ ಹೊಡಿಹೋಗ್ತಾರೆ ಅದೇ ರೀತಿ ಹಾವು ಅಂದಕೂಡಲೇ ರೋಮಗಳೆಲ್ಲ ಎದ್ದು ನಿಲ್ಲುತ್ತವೆ, ಈ ರೀತಿ ಮನುಷ್ಯ ಹಾವಿನ  ವಿಷಯದಲ್ಲಿ ತುಂಬಾ ಭಯಪಡುವು ನಿಜವಾದ ಸಂಗತಿ ಇನ್ನು ಹಾವಿನ ವಿಷಯದಲ್ಲಿ ಮನುಷ್ಯನಲ್ಲಿ ಮೂಢನಂಬಿಕೆಗಳಿವೆ, ಮತ್ತು ಎಲ್ಲ ಹಾವುಗಳು ವಿಷಪೂರಿತ ಎಂಬ ನಂಬಿಕೆಯಿದೆ ಆದಅದು ತಪ್ಪು ಕೆಲ ಹಾವುಗಳು ವಿಷಯುಕ್ತ, ಮತ್ತೆ ಕೆಲ ಹಾವುಗಳು ವಿಷರಹಿತ ಹವುಗಳಿವೆ.
ನಮ್ಮ ಏಷ್ಯಾಖಂಡದಲ್ಲಿ ಅತೀ ಹೆಚ್ಚು ಅಪಾಯಕಾರಿ ಮತ್ತು ವಿಷಕಾರಿ ಹವುಗಳೆಂದರೆ, ಮೊದನೆಯದಾಗಿ "ಕಾಳಿಂಗಸರ್ಪ(king cobra)"
ಎರಡನೆಯದಾಗಿ "ನಾಗರ ಹಾವು"(specticle cobra)
ಮೂರನೆಯದಾಗಿ"ಕಟ್ಟು ಹಾವು"(common Krait)
ಅದೇ ರೀತಿ ಕೊನೆಯಲ್ಲಿ ನಾವು ಇವತ್ತು ಹೇಳ ಹೊರಟಿರುವುದು "ಮಂಡಲದ ಹಾವು"(Indian Russell viper) ಇದು ಅತ್ಯಂತ ವಿಷಕಾರಿ ಮನುಷ್ಯನಿಗೆ ಅಪಾಯಕಾರಿ, ಮತ್ತು ಈ ಹಾವಿಗೆ ಕೆಲ ಭಾಗಗಳಲ್ಲಿ ಕೆಲ ಪ್ರದೇಶಗಳಲ್ಲಿ,"ಕೊಳಕು ಮಂಡಲ, ಉರುಪಂಜರ,ಉರುಮಂಡಲ,ಕನ್ನಡಿ ಹಾವು" ಈ ರೀತಿ ನಾನಾ ಹೆಸರುಗಳಿಂದ ಈ ಹಾವನ್ನ ಕರೆಯಲಾಗುತ್ತದೆ.
ಮಂಡಲ ಹಾವು ಗಾತ್ರ ಮತ್ತು ಆಕಾರ: ಸಾಮಾನ್ಯವಾಗಿ ನೀವು ಮೇಲೆ ಕಾಣುವ ಚಿತ್ರಣವನ್ನ ಗಮನಿಸಿದರೆ ತಿಳಯಬಹುದು ಮಂಡಲದ ಹಾವು ಇದೇ ತೆರನಾಗಿ ಕಾಣಿಸುತ್ತದೆ ಮೈಮೇಲೆ ಕಂದು, ಕಪ್ಪು ವೃತ್ತದ ರೀತಿಯ ಚೈನ್ ತೆರನಾದ ಆಕಾರ ಹೊಂದಿರುತ್ತದೆ.
ಗಾತ್ರ: ಇದರಲ್ಲಿ ಗಂಡು ಹಾವಿಗಿಂತ ಹೆಣ್ಣು ಹಾವು ದಪ್ಪ ಜಾಸ್ತಿ ಇರುತ್ತೆ ಮತ್ತೆ ಈ ಹಾವು ಮೊಟ್ಟೆಗಳನ್ನ ಇಡುವುದಿಲ್ಲ ನೇರವಾಗಿ ಮರಿಗಳನ್ನು ಹಾಕುತ್ತವೆ.
ಆಹಾರ:ಇದು ಹೆಚ್ಚಾಗಿ ಆಹಾರ ಹುಡುಕಿಕೊಂಡ ಹೋಗುವುದಿಲ್ಲ ಪ್ರತಿಯಾಗಿ ಆಹಾರವೆ ಇದರ ಬಳಿ ಬರುವ ಹಾಗೆ ಮಾಡುತ್ತದೆ,ಅಲ್ಲದೆ ಆಹಾರಕ್ಕಾಗಿ ಜಾಗವನ್ನು ಬಡಲಿಸುತ್ತಿರುತ್ತದೆ, ಅಂದರೆ ಇಲಿಗಳ ಬಿಲದಲ್ಲಿ ಕಪ್ಪೆಗಳಿರುವ ಜಾಗಗಳಲ್ಲಿ ಅವಿತು ಕುಳಿತುಕೊಳ್ಳುತ್ತದೆ.
ಇವು ಮರಿ ಇದ್ದಾಗ ಸಣ್ಣ ಕಪ್ಪೆ ಗಳನ್ನ ದೊಡ್ಡದಾದ ಹಾವುಗಳು ಇಲಿಗಳನ್ನಾ ಹೆಚ್ಚಾಗಿ ಸೇವಿಸುತ್ತವೆ ಈ ರೀತಿ ಇವುಗಳ ಆಹಾರ ಕ್ರಮವಾಗದೆ.
ವಿಷ:ಇದರ ವಿಷದ ಬಗ್ಗೆ ಹೇಳುವುದಾರೆ ತುಂಬಾ ವಿಷಕಾರಿ,ಇದರಲ್ಲಿ "ಹೀಮೂ ಟಾಕ್ಸಿಕ್" ಎಂಬ ಅತ್ಯಂತ ಅಪಾಯಕಾರಿ ವಿಷ ಇದರ ಹಲ್ಲುಗಳಲ್ಲಿ ತುಂಬಿಕೊಡಿರುತ್ತದೆ. ಇದರ ವಿಷ ಮನುಷ್ಯನಿಗೆ ಅಪಾಯವೆಂದರೆ ಮನುಷ್ಯನಿಗೆ ಈ ಹಾವು ಕಚ್ಚಿ,ಸರಿಯಾದ ಸಮಯಕ್ಕೆ ಔಷದ ಅಥವಾ ಚಿಕಿತ್ಸೆ ಸಿಗದೆ ಹೋದರೆ ವ್ಯಕ್ತಿಗೆ ಹಾವು ಕಚ್ಚಿದ ಭಾಗದಲ್ಲಿ ಉರಿ, ಊತ, ಆ ಭಾಗ ಕಪ್ಪಾಗುವುದು,ವಾಂತಿ, ಭೇದಿ ಈ ರೀತಿ ಮೋದಲ್ನೆಯ ಸೋಚನೆಗಳಗಿವೆ ಇದಾಗಿಯೂ ಹಾವು ಕಚ್ಚಿದ ವ್ಯಕ್ತಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಆ ವ್ಯಕ್ತಿಯ ಮೂತ್ರಪಿಡಗಳ ಸಮಸ್ಯೆ,ದೇಹ ಕೊಳೆಯುವಿಕೆ ಸಮಸ್ಯೆ ಒಟ್ಟಾರೆ ಜೀವ ಕಳೆದುಕೊಳ್ಳ ಬೇಕಾಗುತ್ತದೆ.ಇದರ ಬಗ್ಗೆ ಕೆಳಗೆ ಕೊಟ್ಟಿರುವ ಚಿತ್ರಣ ನೋಡಿ.
ಆದರೆ ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತರೆ ಸಾವಿನ ದಡೆಯಿಂದ ಉಳಿಯುವ ಸಾಧ್ಯತೆಯಿದೆ.

Monday, November 7, 2022

ಹಸಿರು ಹಾವು.

ಹಸಿರು ಹಾವು ಇದು ಹೇಳುವ ಹಾಗೆ ಇದರ ಬಣ್ಣ ಕೂಡ ಹಸಿರಾಗೆ ಇರುತ್ತದೆ
ಇದರ ಗಾತ್ರ(ದಪ್ಪ) ಬೇರೆ ಹಾವುಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿರುತ್ತದೆ,ಆದರೆ ಈ ಹಾವಿನ ಉದ್ದ ಮಾತ್ರ ಹೆಚ್ಚಿರುತ್ತದೆ, ಅಂದಾಜು ನಾಲ್ಕರಿಂದ ಐದು ಅಡಿ ಇನ್ನೂ ಹೆಚ್ಚೇ ಇರುತ್ತದೆ.
ಹಸಿರು ಹಾವು ನೋಡೋಕೆ ಹಸಿರು ದಾರದಂತೆ(ಹಗ್ಗ) ಕಾಣಸಿಗುತ್ತವೆ.
ಈ ಹಾವುಗಳು ಹೆಚ್ಚಾಗಿ ಹಸಿರು ಗಿಡಗಂಟಿಗಳಲ್ಲಿಯೇ ವಾಸಿಸುವ ಒಂದು
ಸರಿಸೃಪವಾಗಿದೆ.ಇದರ ಆಹಾರ ಸಣ್ಣ ಸಣ್ಣ ಮಿಡತೆ, ಹುಳು, ಓತಿಕ್ಯಾತ,
ಮುಂತಾದ ಚಿಕ್ಕ ಚಿಕ್ಕ ಹಲ್ಲಿ ಇವು ಇದರ ಆಹಾರ ಕ್ರಮವಾಗಿದೆ.

ಮಂಡಲದ ಹಾವು (Indian Russell viper).

ಹಾವು ...! ಅಂದರೆ ಎಲ್ಲರೂ ಹೊಡಿಹೋಗ್ತಾರೆ ಅದೇ ರೀತಿ ಹಾವು ಅಂದಕೂಡಲೇ ರೋಮಗಳೆಲ್ಲ ಎದ್ದು ನಿಲ್ಲುತ್ತವೆ, ಈ ರೀತಿ ಮನುಷ್ಯ ಹಾವಿನ  ವಿಷಯದಲ್ಲಿ ತುಂಬಾ ಭಯಪಡುವು ನಿಜವಾದ ...